ಚಿಣ್ಣರ ದಸರಾ ಎರಡನೇ ದಿನ (ಅಸಾಧ್ಯ ಎನ್ನುವುದು ಯಾವುದು ಇಲ್ಲಾ)
ಪ್ಯಾರಾಲಿಂಪಿಕ್ಸ್ ಅಟ
ಚಿಣ್ಣರ ದಸರಾ ಎರಡನೇ ದಿನ ಮಕ್ಕಳಿಗೆ ಪ್ಯಾರಾಲಿಂಪಿಕ್ಸ್ ಆಟಗಳ ಬಗ್ಗೆ ಬಹಳಷ್ಟು ಮಾಹಿತಿ ನೀಡಿದೆವು ನಂತರ ಬೇಸಿಗೆ ಮತ್ತು ಚಳಿಗಾಲದ ಪ್ಯಾರಾಲಿಂಪಿಕ್ಸ್ ಬಗ್ಗೆ ಹೇಳಿದೆ. ನಾನು ಶೀತಲ್ ದೇವಿ ಸಣ್ಣ ಕಥೆ ಹೇಳಿದೆ ಮಕ್ಕಳಿಗೆ ತುಂಬಾ ಖುಷಿ ಆಯಿತು. ಪ್ಯಾರಾಲಿಂಪಿಕ್ ಆಟದ ವಿಡಿಯೋಗಳನ್ನು ತೋರಿಸಿದೆ. ಮಕ್ಕಳಿಗೆ ತಿಳಿಯಿತು ನ್ಯೂನ್ಯತೆ ಸಾಧನೆಗೆ ಅಡ್ಡಿ ಅಲ್ಲ ಎಂದು. ಎಲ್ಲ ಮಕ್ಕಳಿಗೆ ಓದಲು ಅರ್ಧ ಗಂಟೆ ಸಮಯ ನೀಡಿದೆ. ನಂತರ ರಸಪ್ರಶ್ನೆ ಕೇಳಲು ಪ್ರಾರಂಭಮಾಡಿದೆ. ಮಕ್ಕಳ ಉತ್ಸಾಹ ಅವರ ಉತ್ತರ ಕೊಡುವ ರೀತಿ ನನಗೆ ತುಂಬಾ ಖುಷಿ ತಂದಿತು. ಊಟ ಆದ ನಂತರ ಬಕೆಟ್ ಒಳಗೆ ಚೆಂಡು ಹಾಕುವುದು ಮತ್ತು ನಿಧಾನವಾಗಿ ನಡೆಯುವುದು ಈ ಎರಡು ಆಟಗಳನ್ನು ಆಡುವುದರ ಮೂಲಕ ಎರಡನೇ ದಿನವನ್ನು ಮುಕ್ತಾಯಗೊಳಿಸಿದೆವು.
Comments
Post a Comment