ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಯ ಸಂದರ್ಭದಲ್ಲಿ ನಮ್ಮ ಶಾಲೆ ಸ ಹಿ ಪ್ರ ಶಾಲೆ ಹಳ್ಳಿಗೇರಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ದಿನ ಯಲ್ಲ ಮಕ್ಕಳು ಮುಂಜಾನೆ ಬೇಗನೆ ಬಂದು ಶಾಲೆಯ ಸ್ವಚ್ಛತೆ ಮಾಡುತ್ತಿದ್ದರು ನಾವು ಯಲ್ಲ ಶಿಕ್ಷಕರು ಸೇರಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಫೋಟೋ ತೆಗೆದುಕೊಂಡ ಪೂಜಾ ತಯಾರಿ ಮಾಡಿದೆವು. ಈ ಒಂದು ಸಂದರ್ಭದಲ್ಲಿ ಶಾಲೆಯ SDMC ಸದಸ್ಯರು ಹಾಗೂ ಪಾಲಕರು ಹಾಜರಾಗಿದ್ದರು ಹಾಗೆಯೆ ನಮ್ಮ ವಿದ್ಯಾರ್ಥಿಗಳು ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ನಮ್ಮ ವಿದ್ಯಾಪೋಷಕ ಸಂಸ್ಥೆಯ ಪರವಾಗಿ ನಮ್ಮ ಶಾಲೆಯಲ್ಲಿ ಗಾಂಧೀಜಿ ಅವರ ಕುರಿತು ಒಂದ್ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು ನಮ್ಮ ವಿದ್ಯಾರ್ಥಿಗಳು ತುಂಬಾ ಚೆನ್ನಾಗಿ ಮಾಡಿದರು.ಕಿತ್ತೂರು ರಾಣಿ ಚನ್ನಮ್ಮರ 200 ನೇ ಜಯಂತಿಯ ಅಂಗವಾಗಿ ನಮ್ಮ ಶಾಲೆಯಲ್ಲಿ ಪ್ರಭಂದ ಸ್ಪರ್ಧೆ ಏರಪಡಿಸಲಾಗಿತ್ತು. ಈ ಒಂದು ಸ್ಪರ್ಧೆಯಲ್ಲಿ 6,7, ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಪ್ರಥಮ ,ದ್ವಿತೀಯ ಹಾಗೂ ತ್ರಿತೀಯ ಬಹುಮಾನ ನೀಡಲಾಯಿತು ಮಕ್ಕಳು ತುಂಬಾ ಖುಷಿ ಪಟ್ಟರು. ಬಹುಮಾನ ನೀಡುವುದರಿಂದ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ನಾವು ನೋಡಬಹುದು.
ನಂತರ ಡಾ ಸಮಯದಲ್ಲಿ ನಮ್ಮ್ ವಿದ್ಯಾರ್ಥಿಗಳು ಗಾಂಧೀಜಿ ಕುರಿತು ಒಂದು ನಾಟಕ ಪ್ರದರ್ಶನ ಮಾಡಿದರು. ತುಂಬಾ ಚನ್ನಾಗಿ ಮೂಡಿ ಬಂತು. ಹಾಗೆ ಭಾಗವಹಿಸಿದ ಯಲ್ಲ ವಿದ್ಯಾರ್ಥಿಗಳಿಗೆ ನಾನು ಪೆನ್ನು ನೀಡಿದೆ ಮಕ್ಕಳು ಖುಷಿ ಪಟ್ಟರು.
Comments
Post a Comment