Paralympics 2024
Paralympics 2024
ನಮ್ಮ ಚಿಣ್ಣರ ದಸರಾ ಶಿಬಿರದಲ್ಲಿ ನಾವು ೨ ನೇ ದೀನ್ಆ ಇಟ್ಟುಕೊಂಡ ವಿಷಯ ಪ್ಯಾರಾಲಿಂಪಿಕ್ಸ್, ಈ ಶಬ್ಧಕೇಳಿದ ತಕ್ಷಣ ನಮ್ಮ ಮಕ್ಕಳು ಕೆಲ ತೊಡಗಿದರು ಏನಿದು ಎಂದು. ಮೊದಲಿ
ಗೆ ನಾನು ಹೇಳಿದೆ ಒಂದು ಚಟುವಟಿಕೆ ಮೂಲಕ ಹೇಳ್ತಿನಿ ನೀವು ಅರ್ಥ ಮಾಡಿಕೊಳ್ಳುತ್ತಿರಿ ಎಂದು. ಆಗ ನಾನು ಒಂದೇ ಕಾಲಿನಿಂದ ನೀವು ಓಡಬೇಕು ಹಾಗೆ ಯಾರು ಚನ್ನಾಗಿ ಓಡಿ ಗೆಲ್ಲುತ್ತಿರಿ ಅವರಿಗೆ ಬಹುಮಾನ ನೀಡಲಾಗುವುದು ಎಂದು. ನಮ್ಮ ಮಕ್ಕಳು ತುಂಬಾ ಖುಷಿ ಎಂದ ಆಡಿದರು ಮೊದಲು ನಾನು ೨ ತಂಡಗಳಾಗಿ ಮಾಡಿ ಸಲಹೆ ನೀಡಿ ಅದೇ ರೀತಿ ಅವರು ಆಟ ಆಡಿದರು.

ನಂತರ ನಾನು ಮಕ್ಕಳಿಗೆ ಪ್ಯಾರಾಲಿಂಫಿಕ್ಸ್ ಅಂದರೆ ಏನು ಮತ್ತೆ ಯಾರು ಇದನ್ನ ಆಡುತ್ತಾರೆ, ಯಾವಾಗಿಂದ ಇದು ಪ್ರಾರಂಭ ಆಯಿತು ಎಂದು ವಿವರಣೆ ನೀಡಿದೆ. ಹಾಗೆ ಈ ವರ್ಷ ನಮ್ಮ ಭಾರತ ದೇಶದಿಂದ ಅಭ್ಯರ್ಥಿಗಳು ಭಾಗವಹಿಸಿ ಸುಮಾರ ೨೯ ಪದಕವನ್ನು ತಂದು ಕೊಟ್ಟು ನಮ್ಮ ಭಾರತ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಹಾಗೆ ಅಂಗವಿಕಲರು ಯಾವುದರಲ್ಲಿ ಕಮ್ಮಿ ಇಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ ಎಂದು ವಿವರಣೆ ನೀಡಿದೆ.
ಮಕ್ಕಳಿಗೆ ಈ ವಿಷಯದ ಬಗ್ಗೆ ಇನ್ನು ಕೂತುಹಲ ಹೆಚ್ಚಿಗೆ ಆಯಿತು ನಂತರ ಅವರು ಹಲವಾರು ಪ್ರಶ್ನೆ ಕೇಳತೊಡಗಿದರು ಹಾಗೆಯೆ ಅವರಲ್ಲಿ ಕೂಡ ನಾವು ಹೆಚ್ಚಿನ ಸಾಧನೆ ಮಾಡಬಲ್ಲೆವು ಎಂಬ ಛಲ ಮೂಡಿತು.ನಂತರ ಪ್ಯಾರಾಲಿಫಿಕ್ಸ್ ವಿಷಯದ ಮೇಲೆ ನಾನು ಒಂದು ರಸಪ್ರಶ್ನೆ ಸ್ಪರ್ಧೆ ಹಾಕಿಕೊಂಡಿದ್ದೆ, ಮೊದಲಿಗೆ ನಾನು ಅವರ ತರಗತಿ ಅನುಸಾರ ಹಾಗೆ ಅವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ೪ ತಂಡ ರಚನೆ ಮಾಡಿದೆ ನಂತ್ರ ಅವರಿಗೆ ರಸಪ್ರಶ್ನೆ ಸ್ಪರ್ಧೆಯ ಸಲಹೆ ನೀಡಿದೆ. ಅದಕ್ಕೆ ಅಣುಗೂಣವಾಗಿ ನಾನು ಪ್ರತಿ ತಂಡಕ್ಕೆ ಪ್ರಶ್ನೆ ಕೇಳುತ್ತ ಹೋದೆ, ಮಕ್ಕಳು ನಿಜವಾಗಿಯೂ ತುಂಬಾ ಚನ್ನಾಗಿ ಉತ್ತರ ನೀಡಿದರು. ಕೊನೆಯಲ್ಲಿ ಹೆಚ್ಚು ಅಂಕ ಪಡೆದ್ ತಂಡಕ್ಕೆ ಚಪ್ಪಾಳೆಗಳ ಮೂಲಕ ಅಭಿನಂದನೆ ಮಾಡಲಾಯಿತು.
Comments
Post a Comment