History of our villages

ನಮ್ಮೂರ ಇತಿಹಾಸ

                   ಈ ದಿನ ವಿದ್ಯಾರ್ಥಿಗಳು ತಮ್ಮ ಗ್ರಾಮದ ಇತಿಹಾಸವನ್ನು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದರು. ಅವರೆಲ್ಲರೂ ತಮ್ಮ ಗ್ರಾಮದ ಮಾಹಿತಿಯನ್ನು ಸಂಗ್ರಹಿಸಿದರು. ದೇವಸ್ಥಾನದ ಇತಿಹಾಸ ಮತ್ತು ಅವರ ಗ್ರಾಮದ ಇತಿಹಾಸದ ಬಗ್ಗೆ ಹೇಳಿದರು. ಅದನಂತರ ನಾನು ಕರಡಿಗುಡ್ಡ ಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ವಿವರಿಸಿದೆ. ನಮ್ಮ ಶಾಲೆಯ ಇತಿಹಾಸದ ಬಗ್ಗೆಯೂ ಹೇಳಿದೆ. ವಿದ್ಯಾರ್ಥಿಗಳು ತಮ್ಮ ಶಾಲೆಯ  ಬಗ್ಗೆ ಹೆಮ್ಮೆ ಪಡುತ್ತಾರೆ. ನಂತರ ನಾನು ಹಿವಾರೆ ಬಜಾರ್ ಮತ್ತು ರಾಲೇಗಣ ಸಿದ್ಧಿ ಮಾದರಿ ಗ್ರಾಮಗಳ ಇತಿಹಾಸದ ಬಗ್ಗೆ ಹೇಳಿದೆ. ಆ ಸಮಯದಲ್ಲಿ ನಾನು ಅಣ್ಣಾ ಹಜಾರೆಯವರ ಬಗ್ಗೆ ಹೇಳಿದೆ. ನಂತರ ನಾನು ಗ್ರೂಪ್ ಮಾಡಿ ಸ್ಕೂಲ್ ವಿಷಯ ಕೊಟ್ಟೆ. ವಿದ್ಯಾರ್ಥಿಗಳು ತಮಗೆ ತಿಳಿದಿರುವ ಶಾಲೆಗೆ ಸಂಬಂಧಿಸಿದ ಪದಗಳನ್ನು ಬರೆದರು. ವಿಜೇತರು ಸಂತೋಷಪಟ್ಟರು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯಿಂದ ವರ್ಣಮಾಲೆಯ ಹಾಡುಗಳನ್ನು ಹಾಡಿದರು. ನಂತರ ನಾನು ಎಲ್ಲರಿಗೂ ವರ್ಣಮಾಲೆಯ ಹಾಡನ್ನು ಹಾಡಿಸಿದೆ. ಅದರ ನಂತರ ವಿದ್ಯಾರ್ಥಿಗಳು ವ್ಯಾನಿಶಿಂಗ್ ಆಲ್ಫಾಬೆಟ್ ಫ್ಲ್ಯಾಶ್‌ಕಾರ್ಡ್ ಆಟವನ್ನು ಆಡಿದರು, ಅವರೆಲ್ಲರೂ ತ್ವರಿತವಾಗಿ ಅಕ್ಷರಗಳನ್ನು ಕಂಡುಕೊಂಡರು. ವಿದ್ಯಾರ್ಥಿಗಳು ಸಹ ಈ ಆಟವನ್ನು ಆನಂದಿಸಿದರು.

 




Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆