CHINNARA DASARA
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹನಮನಕೊಪ್ಪ
ಚಿಣ್ಣರ ದಸರಾ ಕ್ಯಾಂಪ್ ಅನ್ನು ಹನಮನಕೊಪ್ಪ ಶಾಲೆಯಲ್ಲಿ 4 ದಿನಗಳ ಕಾಲ ಬೇರೆ ಬೇರೆ ಧ್ಯೇಯಗಳನ್ನು ಇಟ್ಟುಕೊಂಡು ನಾವು ಚಿಣ್ಣರ ದಸರಾ ಕ್ಯಾಂಪ್ ಅನ್ನು ಹಬ್ಬದ ವಾತಾವರಣದಲ್ಲಿ ಯಶಸ್ವಿಯಾಗಿ ಆಚರಣೆ ಮಾಡಿದೆವು ಹಾಗೆಯೇ ಮೊದಲನೆಯ ದಿನ ದಸರಾ ಹಬ್ಬದ ಮಹತ್ವ ಹಾಗೂ ದಸರಾ ಹಬ್ಬದ ವಿಶೇಷಗಳು ಹಾಗೂ ಅರಮನೆ ಹಾಗೂ ದಸರಾ ಹಬ್ಬದ ಅಂಬಾರಿಯ ಮೆರವಣಿಗೆ ಚಿತ್ರವನ್ನು ಒಂದು ವಿಡಿಯೋ ಚಿತ್ರಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ತೋರಿಸಿದೆವು. ಹಾಗೆಯೇ ಎಲ್ಲಾ ವಿದ್ಯಾರ್ಥಿಗಳು ನಮ್ಮ ಭಾರತೀಯ ಸಂಸ್ಕೃತಿಯ ಸೀರೆ ಹಾಗೂ ಬಳೆಗಳು ಸಿಂಧೂರ ಹಾಗೆಯೇ ವಿದ್ಯಾರ್ಥಿಗಳು ಲುಂಗಿ ಹಾಗೂ ಜುಬ್ಬವನ್ನು ಹಾಕಿಕೊಂಡು ಬಂದಿದ್ದರು ಎರಡನೇಯ ದಿನ ನಾವು ಪ್ಯಾರ್ ಒಲಂಪಿಕ್ ಬಗ್ಗೆ ಹೇಳಿದೆವು ಅದರ ವಿಡಿಯೋಗಳನ್ನು ಮಕ್ಕಳಿಗೆ ತೊರಿಸಿದೆವು ಹಾಗೆಯೇ ಮೂರನೆಯ ದಿನ ನಮ್ಮೂರಿನ ವಿಶೇಷತೆ ಹಾಗೂ ಮಹಾರಾಷ್ಟ್ರದ ಎರಡು ಆದರ್ಶ ಗ್ರಾಮಗಳ ಬಗ್ಗೆ ಹೇಳಿದೆವು ಅಲ್ಲಿ ಆದಂತಹ ಅಭಿವೃದ್ಧಿ ಕಾರ್ಯಕ್ರಮಗಳು ಹೈನುಗಾರಿಕೆ ತಂಬಾಕು ಉತ್ಪನ್ನಗಳ ನಿಷೇಧ ಗುಟ್ಕಾ ಸೇರೆ ನಿಷೇಧ ನಮ್ಮ ಭಾರತದ ಆದರ್ಶ್ ಗ್ರಾಮಗಳು ಎಂದು ಹೇಳಬಹುದು. ಹಾಗೆಯೇ ನಾಲ್ಕನೆಯ ದಿನ ಎಲ್ಲ ವಿದ್ಯಾರ್ಥಿಗಳು ಸೀರೆ, ಬಳೆ, ಹಾಗೂ ಕುಂಕುಮ, ಇಟ್ಟುಕೊಂಡು ಬಂದಿದ್ದರು ಹಾಗೆಯೇ ಹನಮನಕೊಪ್ಪ ಊರಿನ ಎರಡು ಪ್ರಸಿದ್ಧ ದೇವಾಲಯಗಳಿಗೆ ಹೋಗಿ ದರ್ಶನ್ ತಗೆದುಕೊಂಡು ಹಾಗೇಯೇ ದ್ಯಾನ ಮಾಡಿದೆವು ನಂತರ ಊರಿನ ಊರಿನ ರಸ್ತೆಯ ಮುಖಾಂತರ ಸಾಲಾಗಿ ಬಂದು ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ವಿಡಿಯೋ ಚಿತ್ರಗಳನ್ನು ತೋರಿಸಿದೇವು, ಹಾಗೆಯ ಊರಿನ ಪಾಲಕರು ಬಂದು ಎಲ್ಲ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದರು ಊಟ ಮುಗಿದ ನಂತರ ಎಲ್ಲಾ ಮಕ್ಕಳು ಡ್ಯಾನ್ಸ್ ಹಾಗೂ ಇನ್ನಿತರೆ ಕಾರ್ಯಕ್ರಮಗಳು ನಡೆದವು ನಾಲ್ಕು ದಿನದ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ನಡೆದವು ಎಲ್ಲಾ ಮಕ್ಕಳು ವಿದ್ಯಾರ್ಥಿಗಳು ಪಾಲಕರು ಬಹಳ ಸಂತೋಷ ಪಟ್ಟರು ಎಂದು ಹೇಳಬಹುದು
Comments
Post a Comment