ಚಿಣ್ಣರ ದಸರಾ ಮೂರನೇ ದಿನ (ತಿಳಿಯೋಣ ಬನ್ನಿ ನಮ್ಮೂರ ಇತಿಹಾಸ )
ಬನಶಂಕರಿ ದೇವಸ್ಥಾನ
ಚಿಣ್ಣರ ದಸರಾ ನಿಮಿತ್ತ ನಮ್ಮೂರ ಇತಿಹಾಸ ತಿಳಿಯಲು ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋದೆ. ದೇವಸ್ಥಾನದಲ್ಲಿ ಮಕ್ಕಳೆಲ್ಲರೂ ಕುಳಿತುಕೊಂಡರು ನಂತರ ನಮ್ಮೂರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಾನು ಮಕ್ಕಳಿಗೆ ತಿಳಿಸಿದೆ. ಅಲ್ಲಿದ್ದ ಓಬ್ಬ ವಿದ್ಯಾರ್ಥಿನಿ ದೇವಿ ಜಾತ್ರೆಯ ಬಗ್ಗೆ ವಿವರಿಸಿದಳು. ಇದಾದ ನಂತರ ನಾನು ಹಿವರೇ ಬಜಾರ್ ಮತ್ತು ರಾಲೇಗನ್ ಸಿದ್ಧಿ ಗ್ರಾಮಗಳ ಬಗ್ಗೆ ಹೇಳಿದೆ. ಮಕ್ಕಳಿಗೆ ತುಂಬಾ ಖುಷಿ ಆಯಿತು. ನಮ್ಮೂರು ಅದೇ ರೀತಿ ಎದ್ದರೆ ಎಷ್ಟು ಚೆಂದ ಇರುತಿತ್ತು. ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮರಳಿ ಶಾಲೆಗೆ ಬಂದು ಇಂಗ್ಲಿಷ್ ಗೆ ಸಂಬಧಿಸಿದ ಆಟಗಳನ್ನು ಆಡಿಸಿದೆ. ಮಕ್ಕಳು ಇವತ್ತು ತುಂಬಾ ಖುಷಿಯಾಗಿದೆ ಎಂದು ನನಗೆ ಹೇಳಿದರು.
ನೋಡ ಬನ್ನಿ ..
ನಮ್ಮೂರ ಸೊಬಗು ..........
Comments
Post a Comment