ಸುಂದರ ಶನಿವಾರ
ಕಳೆದ ಶನಿವಾರ ನನ್ನ ಪಾಲಿಗೆ ಸುಂದರ ಶನಿವಾರವಾಗಿತ್ತು. ಶನಿವಾರ ಸುಂದರವಾಗಿರಲು ಕಾರಣ ನಮ್ಮ ಶಾಲೆಯ ಮಕ್ಕಳು ಶಿಕ್ಷಕರ ದಿನಾಚರಣೆ ಆಚರಿಸಲು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಶಿಕ್ಷಕರಿಗಾಗಿ ಮಕ್ಕಳು ಬಾಲ್ ಎಸೆಯುವುದು, ಮ್ಯೂಸಿಕ್ ಚೇರ್, ಬಲೂನ್ ಸೇವರ್ ಇತ್ಯಾದಿ ಆಟಗಳನ್ನು ಆಯೋಜಿಸಿದ್ದರು. ಏಳು ಮತ್ತು ಎಂಟನೇ ತರಗತಿಯ ಮಕ್ಕಳು ತಮ್ಮಲ್ಲಿಯೇ ಗುಂಪುಗಳನ್ನು ರಚಿಸಿಕೊಂಡು ಒಂದೊಂದು ಗುಂಪು ಒಂದೊಂದು ಆಟದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು ಮತ್ತು ಆ ಆಟದ ನಿಯಮಗಳನ್ನು ತಾವೇ ಹೇಳಿ ಆ ಆಟಗಳನ್ನು ನಡೆಸಿಕೊಟ್ಟರು. ನಂತರ ವಿವಿಧ ಆಟಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ನಂತರ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳು ಆಯೋಜಿಸಿದ ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡಿ ಮಕ್ಕಳಿಗೆ ಧನ್ಯವಾದ ಸೂಚಿಸಿದರು.
Comments
Post a Comment