ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
ನಮ್ಮ ಸಂಸ್ಕೃತಿ ಎಂಬ ವಿಷಯವು ನಮ್ಮ ಚಿಣ್ಣರ ದಸರಾ ಶಿಬಿರದ ಕೊನೆಯ ದಿನವಾಗಿತ್ತು, ಮಕ್ಕಳು ತುಂಬಾ ಉತ್ಸುಕರಾಗಿದ್ದರು ಏಕೆಂದರೆ ಇದು ಅವರಿಗೆ ನಾನು ಸೀರೆ ಹಾಕಿಕೊಂಡು ಬರಲು ಹೇಳಿದ್ದೆ ಮತ್ತೆ ಹುಡುಗರಿಗೆ ಹೊಸ ಡ್ರೆಸ್ ಹೇಳಿದ್ದೆ. ಮಕ್ಕಳು ತುಬಾ ಚನ್ನಾಗಿ ತಯಾರಾಗಿ ಬಂದಿದ್ದರು ಹಾಗೆ ಯಲ್ಲರು ನನಗೆ ಮುಂಜಾನೆಯ ಶುಭಾಶಯ ಹೇಳಿದರು.
ನಾನು 8 ಗಂಟೆಗೆ ಶಾಲೆಗೆ ಹೋಗಿದ್ದೆ ವಿದ್ಯಾರ್ಥಿಗಳು ಆಗಲೇ ಜಮಾಯಿಸಿ ನನಗಾಗಿ ಕಾಯುತ್ತಿದ್ದರು. ಶಿಬಿರದ ಕೊನೆಯ ದಿನದಂದು ನಾನು ಅವರನ್ನು ಸ್ವಾಗತಿಸಿದೆ ನಂತರ ಒಂದು ಎನರ್ಜೈಸರ್ ಆಟವನ್ನು ಮಾಡಿದೆ. ನಂತರ ನಾನು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಮಾತನಾಡಿದೆ. ನಂತರ ವಿದ್ಯಾರ್ಥಿಗಳು OM ಅನ್ನು ಚಿತ್ರಿಸಿದರು ಮತ್ತು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಲ್ಪಟ್ಟಿದ್ದು ನೋಡಲು ತುಂಬಾ ಚೆನ್ನಾಗಿತ್ತು. ನಂತರ ವಿದ್ಯಾರ್ಥಿಗಳು ಕುಟುಂಬ ವೃಕ್ಷವನ್ನು ಚಿತ್ರಿಸಿದರು ಮತ್ತು ನಾನು ಅವರ ಕುಟುಂಬದ ಬಗ್ಗೆ ಕೇಳಿದೆ ಮತ್ತು ಅದರ ಬಗ್ಗೆ ಪ್ರಶ್ನೆಗಳನ್ನು ಕೇಳಿದೆ. ನಂತರ ಎಲ್ಲಾ ವಿದ್ಯಾರ್ಥಿಗಳು ತಮ್ಮ ಹೆಬ್ಬೆರಳಿಗೆ ದಸರಾ ಶಿಬಿರದ ನೆನಪಿನ ನೀಲಿ ಮುದ್ರೆಯನ್ನು ನೀಡುತ್ತಾರೆ. ತುಂಬಾ ಚೆನ್ನಾಗಿತ್ತು. ನಂತರ ವಿದ್ಯಾರ್ಥಿಗಳು ನೃತ್ಯ ಮತ್ತು ಹಾಡುಗಳನ್ನು ಹಾಡುತ್ತಾ ಆನಂದಿಸಿದರು.
4 ದಿನಗಳ ಕಾಲ ನಮ್ಮ ಚಿಣ್ಣರ ದಸರಾ ಕಾರ್ಯಕ್ರಮವನ್ನು ಚನ್ನಾಗಿ ನಡೆಸಿ ಕೊಟ್ಟಿದ್ದಾಕೆ ನಾನು ಮಕ್ಕಳಿಗೆ ಧನ್ಯವಾದ ಹೇಳಿದೆ ಹಾಗೆ ಅವರು ಸಹ ತಮ್ಮ ೪ ದಿನದ ಅನುಭವ ಹಂಚಿಕೊಂಡರು ಕೇಳಿ ನನಗೆ ತುಂಬಾ ಖುಷಿ ಆಯಿತು.
Comments
Post a Comment